ಶುಕ್ರವಾರ, ಆಗಸ್ಟ್ 23, 2013

ಮಿನುಗು ದೀಪ

ಮಿನುಗು ದೀಪ 

ಸ್ವಚ್ಚ ನೆನಪಿನ ಆಗಸದಲಿ 
ಅದೆಷ್ಟೋ 
ಮಿನುಗು ನಕ್ಷತ್ರಗಳು 
ಮತ್ತೆಲ್ಲೋ ಆ  
ಬಯಕೆಯ ಚಂದ್ರ 
ದೂರದಲ್ಲಿ ಎಟುಕದಂತೆ  
ಮಿಂಚುತ್ತವೆ, ಹೊಳೆಯುತ್ತವೆ 
ಕತ್ತಲಾವರಿಸದ ಕೂಡಲೇ
ಕಣ್ತುಂಬುತ್ತವೆ... 

ಈಗೀಗ ಅದೇ ಕತ್ತಲಿಗೆ 
ನಾ ಹಚ್ಚುವ 
ಅವಳೆನ್ನಿಸುವ  
ಬೊಗಸೆಯಗಲದ 
ಮಿನುಗು ದೀಪ 
ತಾ ಚೆಲ್ಲುವ ಬೆಳಕಿನಲ್ಲಿ 
ಬೆಳಗುವಳು ಎನ್ನ 
ನನ್ನರಿತು ತಾನುರಿದು, 
ತನ್ನೆಲ್ಲ ಬಿಸಿಯ ಎನಗಾಗಿ 
ಧಾರೆ ಎರೆಯುವ  
ತಪಸ್ವಿಯಂತೆ ನಿರಂತರ... 

ಕಷ್ಟದ ಕತ್ತಲಲಿ 
ನಾ ದೀಪ ಹಚ್ಚದಿದ್ದರೂ  
ನಾ ಮರೆತರೂ 
ತಾ ಮಿಂಚಿ 
ತನ್ನಿರುವ ತಾ 
ತೋರಿ ಮಿಂಚುವಳು 
ಮಿಂಚು ಹುಳುವಾಗಿ
ಕೈಗೆಟುಕುವ ಹತ್ತಿರವಾಗಿ 
ಕತ್ತಲಿಗೆ ಮತ್ತದೇ  
ಸರಳ ಸ್ಪಷ್ಟ ಉತ್ತರವಾಗಿ...    

ರುದ್ರಪ್ಪ... 

2 ಕಾಮೆಂಟ್‌ಗಳು:

Sriii :-) ಹೇಳಿದರು...

very nice sir,
ಕತ್ತಲಿಂದ ಬೆಳಕಿನೆಡೆ ನಮ್ಮ ನಡೆ,
ಬೆಳಕು ನಿರಂತರವಾಗಿರಲಿ, ನಿರಾತಂಕವಾಗಿರಲಿ .......

Badarinath Palavalli ಹೇಳಿದರು...

ತಾನುರಿದು ಬೆಳಕನೀವ ಸದ್ಗುಣ ಅವಳಲ್ಲಿ ಮಾತ್ರ ಗೋಚರ ನಮಗೆ. ಉಳಿದವರು ಸುಟ್ಟು ನಮ್ಮತನ ಕಾಯಿಸಿಕೊಳ್ಳುವರಲ್ಲ ಕಾವ ಚಳಿಗೆ!