ಶುಕ್ರವಾರ, ಜನವರಿ 4, 2013

ವಿಧಿಯಾಟ

ವಿಧಿಯಾಟ
ನಾವು, ನೀವು, ಅವರು, ಇವರು,

ಎಲ್ಲ ವಿಧಿಯಾಟದ ಸ್ಪರ್ಧಿಗಳೇ

ಇಲ್ಲಿ ಗೆದ್ದರೂ ಸದ್ದು...

ಸೋತರೂ ಸದ್ದು...

ಗೆದ್ದರೆ ಹಾರಾಟ!

ಸೋತರೆ ಹೋರಾಟ!ರುದ್ರಪ್ಪ...

ಚಿಕ್ಕಪ್ಪ...

ಚಿಕ್ಕಪ್ಪ...
ಚಿಕ್ಕ ಕೈಯೊಂದು

ನನ್ನ ಬೆರಳಿಡಿದು

ಚಿಕ್ಕ ಅಪ್ಪನ ಅನುಭವ...ತಿವಿ ತಿವಿದು ಮಾತಾಡಿಸುವ

ತಿಳಿ ಕಣ್ಣುಗಳ

ಗುರುತಿಸುವ ನೋಟದಿಂದ...ಚಿಕ್ಕ ಖುಷಿಯೊಂದು

ನನ್ನ ಮನವಿಳಿದು

ಕಣ್ಮುಂದೆ ಕಿಲ ಕಿಲನೆ ಅರಳುವ ...ಆ ಚಿಕ್ಕ ಚಿಟ್ಟೆಯ

ಭಾಷೆ ತಿಳಿಯದಿದ್ದರೂ

ಎಲ್ಲ ಅರ್ಥ ಮಾಡಿಕೊಳ್ಳುವ...ಮಾತು ಬಾರದ ಮೂಕ

ಭಾಷೆಯೇ ಈ ಮನಕೆ

ಎಷ್ಟೋ ಮುದ ನೀಡುವ...ರುದ್ರಪ್ಪ...See More

ಬೇಡುವೆ...

ಬೇಡುವೆ...
ನಿಷ್ಟುರತೆಯ ಎತ್ತರವ ಬಿಟ್ಟು

ಕರುಣೆಯೇ ನೀನೊಮ್ಮೆ

ಬೇಡುವ ಕೈಗೆ ಇಳಿಯಬಾರದೇ?...ಹಣೆಗೆರೆಗಳ ಏರಿ ಕೂತ

ಕಿರುನಗೆಯೇ ನೀನೊಮ್ಮೆ

ಕೆನ್ನೆ ಗುಳಿಗೆ ಜಾರಬಾರದೇ?...ನೋವಿನಲ್ಲಿ ಕಳೆದು ಹೋದ

ಜೀವವೇ ಮರಳಿ

ಉಳಿದ ಜೀವನಕೆ ಸಿಕ್ಕು ನಲಿಯಬಾರದೇ?ರುದ್ರಪ್ಪ...

ಪ್ರಭಾತ ...

ಪ್ರಭಾತ ...
ಮಂಜು ಹನಿವ ಸಮಯ,

ರಾತ್ರಿ ಮಳೆಗೆ ನೆಂದ

ಚುಹು ಚುಹು ಇಂಚರ

ಬಾ ಎನ್ನುತಿದೆ ಮೂಡಣಕೆ ರವಿಯ...ಕಪ್ಪು ಮೋಡಗಳ

ಹೊದ್ದು ಮಲಗಿದ್ದ ರಾತ್ರಿಯಾದಾಗ

ಎದ್ದು ನೋಡಿದರೆ ಮಳೆಗೆ

ನೆನೆದು ಬಿಳಿಯ ಶುಭ್ರ ಈಗ ...ಸಾಗುತಿದೆ ಜೀವ ಸಂಕುಲ

ಹೊಸದಿನದ ಹಬ್ಬದ

ಪ್ರಭಾತ ಪ್ರೈರಿಯಲಿ

ತನ್ನದೇ ತಯ್ಯಾರಿಯಲಿ ...ರುದ್ರಪ್ಪ...

ವೈಕುಂಠ ಏಕಾದಶಿ

ವೈಕುಂಠ ಏಕಾದಶಿಯ ದರ್ಶನಕ್ಕೆ
ಕಿ ಮೀ ಉದ್ದದ ಸಾಲು,ಸಾಲಿನಲ್ಲಿ ನಿಂತವರನಂಬಿಕೆಗೆ ನಮಸ್ಕರಿಸಿನಾ ಮನೆಯತ್ತ ದಾಪುಗಾಲು...ರುದ್ರಪ್ಪ...

ಕಲ್ಲು ...

ಕಲ್ಲು ...
ಕೆನೆಗಟ್ಟಿದ ಮೊಸರಿನ ಕನಸಲ್ಲೂ

ಒಂದು ಬೆಣಚು ಕಲ್ಲು...

ಕಟ್ ಎಂದಾಗಲೇ

ಕನಸು ತುಂಡಾಗಿದ್ದು ...

ನಿದ್ದೆ ಮುಗಿದರೂ

ಮೈ ಜುಮ್ ನಿಲ್ಲಲಾರ್ದು...ರುದ್ರಪ್ಪ...

ಪಂಜರ...

ಪಂಜರ...
ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ

ಮತ್ತೆ ಕತ್ತಲೊಮ್ಮೆ

ಬೆಳಕಾಯಿತು..

ನಗ್ನ ಬಯಕೆಯಾಕಶದಿ

ಬಟ್ಟೆ ಕಳಚಿ

ಚಂದ್ರನೊಮ್ಮೆ ಸೂರ್ಯನಾದ...

ರಾತ್ರಿ ಮೌನ

ಅಲ್ಲಿ ಇಲ್ಲಿ ನೆಲಕೆ ಚೆಲ್ಲಿ

ಈಗ ಚಿಲಿ ಪಿಲಿ ನಿನಾದ...

ಹಾರು-ದಿಕ್ಸೂಚಿಯ

ಮುಳ್ಳು ಹಿಡಿದು

ಆಸೆ ಹಕ್ಕಿಗಳ ಸಂವಾದ...ನಡುವೆ ಅಣಕು ಚರ್ಚೆಗಳು :ಸಂಜೆಗತ್ತಲಿನ ಕಂಬಿಯ

ಪಂಜರದೊಳಗೆ ಸಾರ್ಥಕತೆ ಹೊತ್ತು

ನಾವು ಹಾರಬಲ್ಲೆವಾ?

ಎಂದಾದರೂ

ಈ ಎಲ್ಲೆಯ

ನಾವು ಮೀರಬಲ್ಲೆವಾ ?ರುದ್ರಪ್ಪ....