ಗುರುವಾರ, ಫೆಬ್ರವರಿ 23, 2012

ಮಲಗಿದ ಕಾವಲುಗಾರ...



ಕವಿದ ಮಂಜೆಲ್ಲ ಬೆಳಕಿನಲಿ ಆದಂತೆ ಮಾಯಾ
ಕತ್ತಲು ಕೂಡ ಬೆಳಕಿನಲ್ಲಿ ಕರಗುವ ಸಮಯ
ಕಣ್ಬಿಟ್ಟರೆ ಕನಸೊಂದು ಮುಗಿದು ಬಿಡುವ ಭಯ
ನಿದ್ದೆಯ ಮುದ್ದೆ ಮಾಡಿ ಹಿಡಿದಿಟ್ಟುಕೊಳ್ಳುವ ಜೀವ
ದಿಂಬೊಂದ ತಬ್ಬಿ ಕನಸನ್ನು ನನ್ನದೆಂದು
ಬಿಗಿಯಾಗಿ ಬಿಡದಂತೆ ಅಪ್ಪಿಕೊಳ್ಳುವ ...

ಎಲ್ಲ ಮೀರಿ ಮಲಗಿಹೆ ಕನಸಿಗೆ ಕಾವಲಿತ್ತು
ಅರಳಿ ನಿಂತ ಚಹದ ಘಮ ಘಮ ಮೂಗಿನಲಿ,
ನುಸುಳುವ ಸುಬ್ಬಲಕ್ಷ್ಮಿಯಾ ಹಾಡು ಕಿವಿಯ ಸಂದಿಯಲಿ
"ಏಳೋ ಏಳೋ" ಎನ್ನುವ ಅಪ್ಪನ ಅಬ್ಬರವ
"ಏಳಪ್ಪ ಏಳಪ್ಪ" ಎನ್ನುವ ಅಮ್ಮನ ವಾತ್ಸಲ್ಯವ
ಏನೂ ಬೇಡವೆನಿಸಿ ಮತ್ತೆ ಕನಸಿಗೆ ಮಲಗಿ ಕಾವಲಿರುವ...

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: