ಶುಕ್ರವಾರ, ಜನವರಿ 4, 2013

ಪಂಜರ...

ಪಂಜರ...




ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ

ಮತ್ತೆ ಕತ್ತಲೊಮ್ಮೆ

ಬೆಳಕಾಯಿತು..

ನಗ್ನ ಬಯಕೆಯಾಕಶದಿ

ಬಟ್ಟೆ ಕಳಚಿ

ಚಂದ್ರನೊಮ್ಮೆ ಸೂರ್ಯನಾದ...

ರಾತ್ರಿ ಮೌನ

ಅಲ್ಲಿ ಇಲ್ಲಿ ನೆಲಕೆ ಚೆಲ್ಲಿ

ಈಗ ಚಿಲಿ ಪಿಲಿ ನಿನಾದ...

ಹಾರು-ದಿಕ್ಸೂಚಿಯ

ಮುಳ್ಳು ಹಿಡಿದು

ಆಸೆ ಹಕ್ಕಿಗಳ ಸಂವಾದ...



ನಡುವೆ ಅಣಕು ಚರ್ಚೆಗಳು :



ಸಂಜೆಗತ್ತಲಿನ ಕಂಬಿಯ

ಪಂಜರದೊಳಗೆ ಸಾರ್ಥಕತೆ ಹೊತ್ತು

ನಾವು ಹಾರಬಲ್ಲೆವಾ?

ಎಂದಾದರೂ

ಈ ಎಲ್ಲೆಯ

ನಾವು ಮೀರಬಲ್ಲೆವಾ ?



ರುದ್ರಪ್ಪ....

ಕಾಮೆಂಟ್‌ಗಳಿಲ್ಲ: