ಶುಕ್ರವಾರ, ಜನವರಿ 4, 2013

ಬೇಡುವೆ...

ಬೇಡುವೆ...




ನಿಷ್ಟುರತೆಯ ಎತ್ತರವ ಬಿಟ್ಟು

ಕರುಣೆಯೇ ನೀನೊಮ್ಮೆ

ಬೇಡುವ ಕೈಗೆ ಇಳಿಯಬಾರದೇ?...



ಹಣೆಗೆರೆಗಳ ಏರಿ ಕೂತ

ಕಿರುನಗೆಯೇ ನೀನೊಮ್ಮೆ

ಕೆನ್ನೆ ಗುಳಿಗೆ ಜಾರಬಾರದೇ?...



ನೋವಿನಲ್ಲಿ ಕಳೆದು ಹೋದ

ಜೀವವೇ ಮರಳಿ

ಉಳಿದ ಜೀವನಕೆ ಸಿಕ್ಕು ನಲಿಯಬಾರದೇ?



ರುದ್ರಪ್ಪ...

ಕಾಮೆಂಟ್‌ಗಳಿಲ್ಲ: