ಗುರುವಾರ, ಫೆಬ್ರವರಿ 23, 2012

ಗೋಡೆ ಗಡಿಯಾರದ ಸಂಸಾರ ...

ಈ ಕವನ Dr.D.T.Krishna Murthy. ಅವರ "ಗಡಿಯಾರ !!" ಎಂಬ ಕವನದಿಂದ ಪ್ರೇರೇಪಿತನಾಗಿ ಬರೆದದ್ದು, ಸಾಮ್ಯಗಳ ಅದೇ ಕವನದಿಂದ ಹಿಡಿದು ತಂದಿದ್ದು...



ಅವರ ಪರವಾನಿಗೆಯಿಲ್ಲದೆ ಹಂಚಿಕೊಳ್ಳುತ್ತಿದ್ದೇನೆ... ಮತ್ತು ಕ್ಷಮೆ ಕೋರುತ್ತಿದ್ದೇನೆ ...


http://www.dtkmurthy.blogspot.in/2011/10/blog-post_17.html



ಗೋಡೆ ಗಡಿಯಾರದ ಸಂಸಾರ ...






ನೀನೊಂದು ನಿಮಿಷದ ಮುಳ್ಳು
ನಾನೊಬ್ಬ ಘಂಟೆಯ ಮುಳ್ಳು
ನೀ ಅರವತ್ತು ಬಾರಿ ಕರೆಯಲು
ನಾ ಒಂದು ಬಾರಿ ಓ ಎನ್ನಲು
ಇದು ತಾತ್ಸಾರವಲ್ಲ ಕಣೆ
ನಿನ್ನ ದನಿ ಪದೆ ಪದೇ ಕೇಳುವ ಚಪಲ

ನಿಮಿಷಕ್ಕೊಂದು ಹರಿದಾಡುವ ನಿನ್ನ ಆಸೆ
ಮಾಡಿದೆ ಕನ್ನ ಹಾಕುವ ಸಂಚನ್ನ
ನೋಡುತ ನನ್ನ ಜೇಬನ್ನ
ಸುತ್ತಿಗೊಂದು ಬಾರಿ ಹತ್ತಿರ ಸುಳಿವ ನೀನು
ನಿಮಿಷಕ್ಕೊಂದು ಬಾರಿ ತಿವಿದು
ಹೇಳುವೆ "ಎಷ್ಟು ನಿಧಾನ ನೀವು"!!

ಟಿಕ್ ಟಿಕ್ ಎನ್ನುವ ಹೃದಯದಲ್ಲಿ
ಹುಟ್ಟುವ ಸದ್ದಿಲ್ಲದ ಆಸೆಗಳಲಿ
ಕೇಳಿದ್ದೆಲ್ಲ ಕೊಡಿಸದಿದ್ದರೆ
ಪ್ರೀತಿಯ ಹಠಾತ್ ಮುಷ್ಕರ !!
ಜೋಡು ಮುಳ್ಳಿನ ಬ್ಯಾಟರಿ ಮುಗಿದ ಥರ

ಸಂಧಿಸುವ ಸಮಯ ಮೀರುತಿದೆ
ಮುನಿಸನ್ನು ಬಿಟ್ಟು ಬರಬಾರದೆ
ಹೇಳು ನೀನು, ಬೇಡವೇನು ?
ನಿನ್ನ ನನ್ನ ಸದಾ ಸುತ್ತುವ
ಸೆಕಂಡಿನ ಮುಳ್ಳುಗಳು ನಿನಗೆ !!

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: