ಬಸ್ಸಿನ ಹಿಂದಿನ ಸೀಟಿನ್ಯಾಗ ಯಾರೋ ಒಬ್ಬ ಪುಣ್ಯಾತ್ಮ ಗೆಳೆತನದ ಬಗ್ಗೆ ಭಾಳ ಹೇಳಕತ್ತಿದ್ದ... ನಂಗು ಒಂದ್ ಸಲ ನಗು ಬಂತನ್ರಿ... ಏನ್ ಮಾಡೋದು! ಅವ ಹೆಳೂದ್ರಾಗು ಒಂದು ಅರ್ಥ ಅದ...
Friendship day...!!
ಗೆಳೆಯ ಗೆಳತಿಯರ ಹಬ್ಬ ಅನ್ಕೋರಿ ... ಈ ದಿವಸ ಮಿತ್ರ ವೃಂದ ಒಬ್ಬರಿಗೊಬ್ಬರು ಶುಭಾಶಯ ಹೇಳೂದ್ರಿಂದ ಶುರು ಮಾಡ್ಕೊಂಡು, ಹಳೇದು ಹೊಸಾದು ಹಂಚ್ಕೊಂಡು, ಮೆಲಕು ಹಾಕೋ ಸಮಯ...
ಈ ಭರದಾಗ ನಮ್ಮ ನಿಮ್ಮ ನಡುವ ಇರುವಂತಾ ಸೂಕ್ಷ್ಮಗಳು ಅರ್ಥ ಕಳಕೊಂಡು, ತೋರಿಕೆಯತ್ತ ನಮ್ಮ ಮನ ಸೆಳೀತದ... ಎಷ್ಟೋ ಸರ್ತಿ ಈ ತೋರಿಕೆ ಜನರನ್ನ ಕ್ಷಣಿಕ ಕಾಲಕ್ಕ ಹತ್ರ ಎಳೀತದ ಅಂದ್ಕೊಂಡ್ರು, ಅದು ತಾತ್ಕಾಲಿಕ ಅನ್ನಿಸಿದಾಗ ಮನಸ್ಸಿಗೆ ನೋವು ಆಗ್ತದ...
ಈ ಭರದಾಗ ನಮ್ಮ ನಿಮ್ಮ ನಡುವ ಇರುವಂತಾ ಸೂಕ್ಷ್ಮಗಳು ಅರ್ಥ ಕಳಕೊಂಡು, ತೋರಿಕೆಯತ್ತ ನಮ್ಮ ಮನ ಸೆಳೀತದ... ಎಷ್ಟೋ ಸರ್ತಿ ಈ ತೋರಿಕೆ ಜನರನ್ನ ಕ್ಷಣಿಕ ಕಾಲಕ್ಕ ಹತ್ರ ಎಳೀತದ ಅಂದ್ಕೊಂಡ್ರು, ಅದು ತಾತ್ಕಾಲಿಕ ಅನ್ನಿಸಿದಾಗ ಮನಸ್ಸಿಗೆ ನೋವು ಆಗ್ತದ...
ತೋರಿಕೆಯ ಬೆರಿಕೆ ಎಲ್ಲರ ಮನದೊಳು...
ತನ್ನ ತಾ ಎಂದು ಹೇಳುವ ಬಯಕೆ ಎಲ್ಲರೊಳು ...
ಎಲ್ಲದರಲಿ ತಾನೇ ಮಹಾ ಮುಂದಾಳು...
ತಾನಿಲ್ಲದಿರೆ ಏನು ಜರುಗಲಾರದು ಈ ಜಗದೊಳು...
ತನ್ನ ತಾ ಹೊತ್ತೊಯ್ಯುವವ ಇನ್ನು ಹುಟ್ಟಿಲ್ಲ...
ಆದರು ಮಾನವ ತೋರಿಕೆಯ ಮನದ ಹೊರಗೆ ಬಿಡಲಿಲ್ಲ...
nಅಮ್ಮ ಗೆಳೆತನ ಮೊದಲು ಶುರು ಆಗೋದು ಅಮ್ಮನಿಂದ, ಅವಳ ಜೋಗುಳದಿಂದ, ಆಮೇಲೆ ಅಪ್ಪ ಅಜ್ಜ ಅಜ್ಜಿ ಆಮೇಲೆ ಕುಟುಂಬದ ಎಲ್ಲ ಸದಸ್ಯರಿಂದ.. ನಂತರ ನಾವು ಆಡಿ ನಲಿಯೋ ಆಟಿಗೆ ಸಾಮಾನಿಂದ... ಗೊಂಬೆ , ಇಷ್ಟವಾದ ತಿನ್ನೋ ಪದಾರ್ಥ, ಮನೆಯ ನಾಯಿಮರಿ, ಎತ್ತಿ ಆಡಿಸೋ ಪಕ್ಕದ್ಮನೆ ಅಜ್ಜಪ್ಪ... ಕುತ್ತಿಮರಿ ಮಾಡೋ ಕೆಲಸದ ಕೆಂಚ... ಶಾಲಿಗೆ ಹೊಂಟ ಮ್ಯಾಲೆ ಆಟಕ್ಕ ಕೂಡೋ classmates... ನಂತರ ಪಾಠಕ್ಕ ಬರೋ ಮತ್ತ ಚೊಲೋ ಕಥಿ ಹೇಳೋ ಮಾಸ್ತರು... ಸ್ವಲ್ಪ ತಿಳುವಳಿಕೆ ಬಂದ ಮ್ಯಾಲೆ ಟಿವ್ಯಾಗ ಬರು ಕಾರ್ಟೂನುಗಳು ಆಮೇಲೆ ಬುದ್ದಿ ಬೆಳೀತಾ ಬೆಳೀತಾ ಧಾರಾವಾಹಿಗಳು ಮತ್ತ ಅದರಾಗ ಬರು ಚಿತ್ರ ವಿಚಿತ್ರ ಪಾತ್ರಗಳು... ಇದನ್ನೆಲ್ಲಾ ನೋಡಿದ್ರ ಒಂದು ಹಾಡು ನೆನಪಿಗೆ ಬರ್ತದ
"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು... ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ಸಾಗುವುದೇ ಜೀವನ..." ಎಷ್ಟು ಖರೆ ಅನ್ನಿಸ್ತದ ಕವಿಯ ಭಾವ...
ನಮ್ಮ ಊರಾಗ “ಮಿತ್ರ ಸಮಾಜ್ ಟೀ ಕ್ಲಬ್” ಅಂತ ಒಂದು ಹೋಟೆಲ್ ಇತ್ತು (ಇವಾಗ್ ಅದು ಇಲ್ಲ)... ಅದರ ಬಗ್ಗೆ ಜನ ಏನ್ ಹೇಳ್ತಿದ್ರು ಅಂದ್ರ ಅದೇ ಊರಾಗ ಹುಟ್ಟಿ ಬೆಳದು retirement ಆದ ಮ್ಯಾಲೆ ವಾಪಸ್ ಬಂದು ಒಂದು ಗೆಳೆಯರ ಬಳಗ ಅದನ್ನ ಶುರು ಮಾಡ್ಕೊಂಡ್ರು, ಅವ್ರಿಗೆ ಅದರ ಮುಖ್ಯ ಉದ್ದೇಶ ಗೆಳೆಯರನ್ನ ಕೂಡಿಸೋದು... ಆ ಹಳೆ ತಲೆಗಳು ಉರುಳಿ ಹೋದಂಗ ಅದರ ಅವನತಿ ಶುರು ಆತು...
ನಮ್ಮೂರು ಕವಿಗಳಿಗೆ, ಕಾವ್ಯ ಪ್ರಿಯರಿಗೆ ಹೆಸರು ವಾಸಿ, "ಗೆಳಯರ ಬಳಗ" ಅಂತ ಶುರು ಆಗಿದ್ದು ನಮ್ಮ ವರಕವಿ ಬೇಂದ್ರೆ ಅವರ ಸಾರಥ್ಯದಿಂದ. ಇಲ್ಲೂ ಕೂಡ ಗೆಳೆಯರ ಗುಂಪು ಒಂದೇ ಮನೋ ಹವ್ಯಾಸ ಉಳ್ಳವರ ಬಳಗ ಕೂಡ್ತಿತ್ತು.
ಕಾಗೆಯ ಗುಂಪೊಂದ ಕಂಡು ನಾ ಕಲಿಯುವುದೇನು?
ಜ್ನಾನದ ಒಂದಗುಳ ಹೊಂದಿದವ ಬಳಗವ ಕೂಡಿಸಬಹುದಲ್ಲವೇನು?
ಕುಂಭದಲಿ ಕೂಡಿಟ್ಟ ಹೊನ್ನಿಗೆ ಹೆಚ್ಚಿನ ಬೆಲೆ ಬರುವುದೇನು?
ಮನಸ್ಸಿದ್ದರೂ ಹಂಚಲು ನನ್ನಲಿ ಜನವಿಲ್ಲವಾದರೇನು?
ಬಳಗದ ಒಳಗ ಸ್ನೇಹದ ಸಿಂಚನವೇನು?
ಜ್ನಾನದ ಒಂದಗುಳ ಹೊಂದಿದವ ಬಳಗವ ಕೂಡಿಸಬಹುದಲ್ಲವೇನು?
ಕುಂಭದಲಿ ಕೂಡಿಟ್ಟ ಹೊನ್ನಿಗೆ ಹೆಚ್ಚಿನ ಬೆಲೆ ಬರುವುದೇನು?
ಮನಸ್ಸಿದ್ದರೂ ಹಂಚಲು ನನ್ನಲಿ ಜನವಿಲ್ಲವಾದರೇನು?
ಬಳಗದ ಒಳಗ ಸ್ನೇಹದ ಸಿಂಚನವೇನು?
ಮಾನವ ಕೂಡ ಬಳಗವ ಸೇರಿಸಬಹುದಲ್ಲವೇನು?
ಈಗಂತೂ ಕೇಳಬ್ಯಾಡ್ರಿ, ಆರ್ಕುಟ್ ಅಂತ ಫೇಸ್ ಬುಕ್ ಅಂತ ನಾನಾ ಥರ ಅಂತರ್ಜಾಲ ಗೆಳೆಯರ ಬಳಗಗಳು ಶುರು ಆಗ್ಯಾವ.. ನಮ್ಮ ಒಬ್ಬ ಮಾಸ್ತರು PEN PAL ಅಂತ ಒಂದು ಬಳಗದ ಬಗ್ಗೆ ಹೇಳ್ತಿದ್ರು. ಅದು ಬರಿ ಪತ್ರ ಬರೆಯೋದ್ರಿಂದ ಗೆಳೆತನ ಬೆಳೆಸೋದು ನಂತರ ನಾವು ನಮ್ಮ ಪತ್ರಗಳ ಮೂಲಕ ಜ್ಞಾನ ಹಂಚ್ಕೊಬಹುದಿತ್ತು. ಇಂತಹ ಸಾಕಷ್ಟು ವಿಷಯಗಳು ನಿಮ್ಮ ಸುತ್ತ ಮುತ್ತಲಿನ ಪರಿಸರದಾಗ ಇದ್ದೆ ಇರ್ತಾವ. ನಾವು ಗಮನಿಸೋದನ್ನ ನಿಲ್ಲಿಸಿ ಬಿಡ್ತೆವೀ.
ಇಲ್ಲೇ ಏನು ಹಂಚ್ಕೊಲಿಕ್ಕೆ ಇಷ್ಟಾ ಪಡ್ತೀನಿ ಅಂದ್ರ ಗೆಳೆತನ ಅನ್ನೋದು ಬರಿ ಹರೆಯಕ್ಕ ಅಥವಾ classmates ಗೆ ಸೀಮಿತ ಅಲ್ಲ , ಬರೀ ಮನುಷ್ಯರ ನಡುವ ಇರಬೇಕಾಗಿಲ್ಲ , ಬರೀ ಸಮವಯಸ್ಕರಾಗಿರ್ಬೇಕಿಲ್ಲ, ನನ್ನ ಗೆಳೆತನಕ್ಕ ಜೀವ ನಾ ತುಂಬಬೇಕು ಯಾಕಂದ್ರ ನನ್ನಲ್ಲಿ ಜೀವಿಸೋ ಹಂಬಲ ಅದ..ಬರೀ ಜೀವ ಐತಿ ಅಂತ ಗೆಳೆತನ ಮಾಡೋದ್ರಲ್ಲಿ ಏನು ಅರ್ಥ ಇಲ್ಲ ...
ಗೆಳೆತನ ಅನ್ನೋದು ಬರಿ ಸಮಯ ಹಂಚಕೊಂಡು ಹರಟೆ ಹೊಡೆಯೋದು ಅಲ್ಲ, ಒಬ್ಬರನೊಬ್ಬರು ಅರ್ಥ ಮಾಡ್ಕೊಂಡು ಸದಾ ಸ್ಪಂದಿಸಿ, ವಿಷಯಗಳ ಸಮರ್ಪಕ ಸಮತುಲನೆ ಮಾಡಿ, ಸಮಝಾಯಿಷಿ ನೀಡಿ, ಪ್ರತಿಯೊಬ್ಬರ ಏಳಿಗೆಯ ಉದ್ದೇಶಕ್ಕ ದುಡಿಯೋ ಮನಸ್ಸುಗಳ ಮಿಲನ...
ಒಂದ ಸರ್ತಿ ವಿಚಾರ ಮಾಡಿದ್ರ ನಮ್ಮ ಅಮ್ಮ ಅಪ್ಪ ಅಕ್ಕ ಅಣ್ಣ ತಂಗಿ ತಮ್ಮ ಎಲ್ಲರು ಈ ಕೆಲಸಗಳನ್ನ ಯಾವುದೇ ಮರು ಆಪೇಕ್ಷೆ ಇಲ್ಲದೆ ಸದಾ ಮಾಡ್ತಾ ಇರ್ತಾರ... ನಮ್ಮಲ್ಲಿ ಎಷ್ಟು ಜನ ಇದನ್ನ ಸರಿಯಾಗಿ ವಿಶ್ಲೇಷಣೆ ಮಾಡ್ತೀವಿ ಹೇಳ್ರಿ...
ಕಾಲಕುದುರೆಯ ಕಣ್ಣಾಗಿರುವ ತೋರಿಕೆ ಮತ್ತು ಅದರ ಆಕರ್ಷಣೆಯ ಮೂಲಕ ಜೀವನ ನೋಡು ಹವ್ಯಾಸ ಪ್ರತಿಯೊಬ್ಬರಲ್ಲೂ ಬೆಳೀತಾ ಇದೆ.
ಕಾಲಕುದುರೆಯ ಕಣ್ಣಾಗಿರುವ ತೋರಿಕೆ ಮತ್ತು ಅದರ ಆಕರ್ಷಣೆಯ ಮೂಲಕ ಜೀವನ ನೋಡು ಹವ್ಯಾಸ ಪ್ರತಿಯೊಬ್ಬರಲ್ಲೂ ಬೆಳೀತಾ ಇದೆ.
ನಾನು ನನ್ನದನ್ನು ಮೀರಿ ....
ಸಾಧನೆಯ ದಾರಿ ...
ಆಕರ್ಷಣೆಯ ಸವಾರಿ...
ತೋರಿಕೆ ಎಂಬ ಏರಿಯ ಏರಿ...
ಮನದ ಮೇಲೆ ಹಗೆಯ ರೂವಾರಿ..
ಫಲವೇನು ಬಿದ್ದರೂ ಜಾರಿ ಜಾರಿ...
ಕಲಿಯಲಿಲ್ಲ ಪಾಠವ ಜಾರಿಬಿದ್ದ ಪ್ರತಿಬಾರಿ...
ಆಕರ್ಷಣೆಯ ಸವಾರಿ...
ತೋರಿಕೆ ಎಂಬ ಏರಿಯ ಏರಿ...
ಮನದ ಮೇಲೆ ಹಗೆಯ ರೂವಾರಿ..
ಫಲವೇನು ಬಿದ್ದರೂ ಜಾರಿ ಜಾರಿ...
ಕಲಿಯಲಿಲ್ಲ ಪಾಠವ ಜಾರಿಬಿದ್ದ ಪ್ರತಿಬಾರಿ...
ಪ್ರತಿಯೊಬ್ಬರೂ ಒಂದೊಂದು ವಸ್ತುಗಳ ಜೊತೆಗೆ ಸ್ನೇಹ ಬೆಳೆಸಿರ್ತೀವಿ. ಉದಾಹರಣೆಗೆ ನಾ ಮತ್ತ ನನ್ನ ಸೈಕಲ್ ಭಾಳ ಚೊಲೋ ಫ್ರೆಂಡ್ಸ್ . ನಾ ಅದನ್ನ ಅದು ನನ್ನ ಚೊಲೋ ನೋಡ್ಕೊಂತಿದ್ವಿ... ನನ್ನ ಗೆಳೆತನಕ್ಕ ಜೀವ ಇತ್ತು. ಅದಕ್ಕ ನಾ ಅದನ್ನ ಯಾವತ್ತು ಮರೀಲಿಕ್ಕೆ ಸಾಧ್ಯ ಇಲ್ಲ. ನನ್ನ ನಿಧಾನ ಜೀವನಕ್ಕ ಒಂದು ಹೊಸ ರೂಪ ಕೊಟ್ಟ ಗೆಳೆತನ... ಹಾಗೆ ನಮ್ಮ ಮನೆಯ ಪಕ್ಕದ ಪುಟ್ಟಿಗೆ, TEDDY BEAR ನ ಜೊತೆ ಗೆಳೆತನ... ಎಷ್ಟು ಮುಗ್ಧತೆ ಅಂದ್ರ ಅದು ಮಾತಾಡದೆ ಇದ್ರೂ ಪುಟ್ಟಿ ಅದರ ಪಾಲಿನದು ತಾನ ಮಾತಾಡಿ ಆಟಾ ಅಡ್ತಿದ್ಲು ... ನನ್ನ ಸ್ನೇಹಿತ ಲೇಖನಿಯ ಗೆಳೆಯ, ಇವಾಗ ಅವನು ಒಳ್ಳೆಯ ಬರಹಗಾರ... ಅವನ ಗೆಳೆತನ ಇನ್ನು ಬೆಳೀತಾ ಅದ...
ಪ್ರತಿಯೊಬ್ಬರ ಸಾಂಗತ್ಯದ ಸಂಗತಿಗಳು ಅಷ್ಟೇ ನಿರ್ಮಲ ಹಾಗು ಜೀವ ಇಲ್ದೆ ಇರೋವಲ್ಲಿ ಜೀವ ತುಂಬೋ ಕೆಲಸ ಮಾಡ್ತಾವ.
ಮ್ಮೂರಿನ ಒಂದು ಫೇಮಸ್ ಕೆರಿ (LAKE) ಅಂದ್ರ ನುಗ್ಗಿಕೇರಿ, ತುಂಬಿದ ಕೆರಿ, ಹನುಮಪ್ಪನ ಗುಡಿ, ಆ ಗುಡ್ಡಗಳ ನಡುವ ಕೆಂಪು ಸೂರ್ಯ ಮುಳುಗೋದು ಎಷ್ಟು ಚಂದ... ಪ್ರತಿ ಶನಿವಾರ ಇಲ್ಲಿಗೆ ಬರೋ ಪ್ರತಿಯೊಂದು ಗೆಳೆಯರ ಗುಂಪು ಆ ದೇವರ ಸನ್ನಿಧಾನಕ್ಕ ಆದರು , ಅಲ್ಲೇ ಅನಾಯಾಸವಾಗಿ ದೊರೆಯೋ ಪ್ರಕೃತಿ ಸಂಪತ್ತನ್ನ ನೋಡಾಕ... ಪ್ರಕೃತಿಯನ್ನ ಸರಿಯಾಗಿ ಸವಿಬೇಕು ಅಂದ್ರ ಒಂದು ಜೊತೆ ಭಾಳ ಮುಖ್ಯ, ನನಗ ತಿಳಿದಂಗ ಇಲ್ಲಿಗೆ ಒಬ್ಬಬ್ಬರೇ ಬರೋ ಜನ ಭಾಳ ಕಡಿಮೆ... ಕಾರಣ ಒಂದೇ, ಗೆಳೆತನ ನಮ್ಮಲ್ಲಿ ಮೂಡಿ ಬರೋ ಕಲ್ಪನೆ ಹಾಗು ಪರಿಸರದ ಸವಿಯೋ ಸ್ವಾದ ಎರಡನ್ನು ಹೆಚ್ಚಿಸ್ತದ.
ಷ್ಟೋ ಸರ್ತಿ ಹೊರಗ ಹೋಗಿ ಮಿರ್ಚಿ ಭಜಿ, ಗಿರಮಿಟ್ಟು ತಿನ್ನಬೇಕು ಅನ್ನಿಸಿದಾಗ ಮನಸ್ಸು ಹುಡುಕೋದು ಮೊದಲು ಜೊತೆಯನ್ನ... ಕಾಲೇಜ್ ಕ್ಯಾಂಟೀನ್ ನ್ಯಾಗ ಒಂದು ಕಪ್ ಚಹಾ ಐದು ಮಂದಿ ಕುಡೀತಿದ್ವಿ, ಗೆಳೆತನ ಅನ್ನೋದು ದುಡ್ಡಿನಿಂದ ಕಟ್ಟಿ ಹಾಕ್ಲಿಕ್ಕೆ ಆಗುದಿಲ್ಲ(ಯಾಕಂದ್ರ ಒಂದ ಕಪ್ ಚಹಾಕ ಮಾತ್ರ ರೊಕ್ಕ ಇರ್ತಿತ್ತು)... ನಾವು ನಮ್ಮದೇ ಆದ ದಾರಿ ಹುಡುಕಿಕೊಂಡು ಪ್ರತಿಯೊಂದು ಚಾಲೆಂಜ್ ಗೆ ಮರು ಉತ್ತರ ರೆಡಿ ಇರ್ತಿತ್ತು... ಸರಿಯಾದ ಜೊತೆ ಮತ್ತು ಗೆಳೆತನ ನಮ್ಮೆಲ್ಲರಲ್ಲಿ ಬದುಕಲು ಬೇಕಾಗುವ ದಿಟ್ಟತನ ಹೆಚ್ಚಿಸ್ತದ...
ನಮ್ಮೆಲ್ಲರ ಜೀವನದಲ್ಲಿ ಒಂದಿಲ್ಲ ಒಂದು ಪ್ರಾಣಿ ಪಕ್ಷಿ ಅಥವಾ ಕೀಟ, ಒಂದಿಲ್ಲ ಒಂದು ಟೈಮ್ ನಲ್ಲಿ ಗುಡ್ ಫ್ರೆಂಡ್ಸ್ ಆಗಿರ್ತವ... ನಾ ನೋಡಿದಂಗ aquarium ನ ಮೀನುಗಳು, ಸಾಕಿದ ನಾಯಿ, ನಮ್ಮ ಮಾತಿಗೆ ಪಲ್ಟಿ ಹೊಡೆಯೋ ಬೋರಂಗಿ ಕೀಟ, "ಹಲೇ" ಅಂದ ಕೂಡ್ಲೇ ಓಡೋ ಕರಿಯ ಬಿಳಿಯ ಎತ್ತುಗಳು, ಚಿನ್ನಾಟವಾಡ್ತಿದ್ದ ಆಕಳು ಕರು... ಹಾರಿ ಬಿಟ್ಟರ, ಹಾರಿ ಮತ್ತ ಮನೆಗೆ ಬರೋ ಪಾರಿವಾಳ.. ಇವೆಲ್ಲ ನನ್ನ ಜೀವನದಲ್ಲಿ ಒಂದೊಂದು ರೀತಿ ಸ್ಪಂದಿಸಿ ಮಾತಿಲ್ಲದೆ ಜೀವನದ ಸರಿಯಾದ ಮಾತನ್ನ ಸರಿಯಾದ ಸಮಯಕ್ಕ ತಿಳಿಸಿ ಕೊಟ್ಟಾವ ...
ಗೆಳೆತನ ನಮಗ ಅರಿವಿಲ್ದೆ ಕಲಿಸೋ ಗುರುವು ಅಂತ ನಾ ಹೇಳಲಿಕ್ಕೆ ಇಷ್ಟ ಪಡ್ತೆನಿ...
ಗೆಳೆತನ ನಮಗ ಅರಿವಿಲ್ದೆ ಕಲಿಸೋ ಗುರುವು ಅಂತ ನಾ ಹೇಳಲಿಕ್ಕೆ ಇಷ್ಟ ಪಡ್ತೆನಿ...
ಇಷ್ಟೆಲ್ಲಾ ಹೇಳಿ ಚಡ್ಡಿ ದೋಸ್ತಿ ಬಗ್ಗೆ ಹೇಳಲ್ಲಿಲ್ಲ ಅಂದ್ರ ಕಳಸ ಇಲ್ಲದ ಗುಡಿ ಕಟ್ಟಿದಂಗ.. ಕಳಸ ಐತಿ ಅಂದ್ರ ಗುಡಿ ಐತಿ ಅಂತ... ನನಗ ಇಬ್ಬರು ಚಡ್ಡಿ ದೋಸ್ತ್ ಇದ್ದರು, ಆಗಿನ ಕಾಲದಾಗ ನನಗ ಜೀವಕ್ಕ ಜೀವ ಕೊಡ್ತೀನಿ ಅನ್ನೋವಷ್ಟು ಹತ್ತಿರದ ಸ್ನೇಹಿತರು... ಅದು ಏನು ಆಪೇಕ್ಷೆಗಳು ಇಲ್ಲದೆ ಬೆಳೆದ ಸ್ನೇಹ... ಚಿಕ್ಕ ಚಿಕ್ಕ ವಿಷಯದೊಳಗ ಮುಗ್ದತೆ ಹೊತ್ತು ಕುಣಿದಾಡೋ ವಯಸ್ಸು... TV ಕಾರ್ಟೂನ್ ನೋಡ್ಬೇಕು ಅಂದ್ರ ನನ್ನ ಗೆಳೆಯ ಬಾಜೂಕ ಇರ್ಬೇಕು.. TV ನೋಡಾಕ ಇಬ್ಬರೂ ಬೇರೆಯವರ ಮನಿಗೆ ಹೋಗ್ತಿದ್ವಿ(ನಮ್ಮ ಇಬ್ಬರದು ಮನ್ಯಾಗ TV ಇರ್ಲಿಲ್ಲ) .. ಒಂದು ದಿನ ಇಬ್ಬರ್ನು ಬೇರೆ ಬೇರೆ ಕುಂದರಿಸಿದ್ರು, ಅವತ್ತ ಇಬ್ಬರು ಡಿಸೈಡ್ ಮಾಡಿದ್ವಿ ಅವ್ರ ಮನಿಗೆ TV ನೋಡಾಕ ಹೋಗೂದು ಕ್ಯಾನ್ಸಲ್ ಅಂತ ...
ಗೆಳೆತನದಲ್ಲಿ ಒಗ್ಗಟ್ಟು ಅನಾಯಾಸದ ಉಡುಗೊರೆ ಆಗಿ ಬರ್ತದ...
ಹೆಂಗ ಹಿರಿಯಾರು ತಲಿ ಮ್ಯಾಲೆ ಕೈ ಇತ್ತು ಹಾರೈಸ್ತಾರ, ಹಂಗ ಗೆಳೆತನಕ್ಕ ಮೊದಲ ಸಾಂಕೇತಿಕ ಕುರುಹು ಅಂದ್ರ ಹೆಗಲ ಮ್ಯಾಲೆ ಕೈ ಹಾಕೋದು... ಯಾರು ಕಂಡು ಹಿಡಿದರೋ ಗೊತ್ತಿಲ್ಲ! ಇದರಾಗ ಭಾಳ ಮಜಾ ಇರತೈತಿ, ಒಬ್ಬರ ಇನ್ನೊಬ್ಬರ ಬಿಟ್ಟು ಮುಂದ ಹೋಗಾಕ ಅಥವಾ ಹಿಂದ ಉಳಿಯಾಕ ಸಾಧ್ಯನ ಇಲ್ಲ... ಈಗ ಬೇರೆ ಬೇರೆ CULTURE ನೋಡಿ, ಹುಡುಗುರ್-ಹುಡುಗುರ್ ಹೆಗಲ ಮ್ಯಾಲೆ ಕೈ ಹಾಕೂದ ನಿಲ್ಲಿಸಿಬಿಟ್ಟಾರ.
ಎಷ್ಟೋ ಚಿತ್ರ ವಿಚಿತ್ರ ಪದ್ದತಿಗಳನ್ನ ಗೆಳೆಯಾರ ನಡುವ ನೋಡೇನಿ... ಉದಾಹರಣೆ ಹೇಳಬೇಕು ಅಂದ್ರ ತೋರಬೆರಳು ಮತ್ತು ಕಿರುಬೆರಳು ಮೊದಲು ಕೂಡಿಸಿ, ನಂತರ ಹೆಬ್ಬೆಟ್ಟುಗಳ ಅಂಟಿಸಿ, ಮುಂಗೈ Clockwise ತಿರುಗಿಸಿ, ಕೈ ಕುಲುಕೋ ಅಭ್ಯಾಸ... ಇತ್ತಿತ್ಲಾಗ ನೋಡಿದ್ದು ಅಂದ್ರ ಮುಷ್ಟಿಗೆ ಮುಷ್ಠಿ ಮೆತ್ತಗ ಗುದ್ದಿ, ಕೈಬೆರಳುಗಳ ಕೊಂಕಿ ಮಾಡಿ, ಕೈಹಿಡಿದು ಭುಜಕ್ಕ ಢಿಕ್ಕಿ ಹೊಡೆಯೋದು... ಮೊದಲ ಆಗಿದ್ರ ಎನಲೇ ಮಂಗ್ಯಾನ ಮಗನ ಎಲ್ಲಿ ಸತ್ತಿದ್ದಿ ಇಷ್ಟು ಹೊತ್ತಿನ ತನಕ ಅಂತ ಶುರು ಆಗೋ ಮೀಟಿಂಗ್ ಈಗ HEY DUDE ಅಂತ ಶುರು ಆಗ್ತದ... ನಮ್ಮ ನಡುವಳಿಕೆ ಮ್ಯಾಲೆ ಮೀಡಿಯಾ ಪರಿಣಾಮ ಭಾಳ ಜೋರ್ ಅದ... ತಲೆಮಾರಿಂದ ತಲೆಮಾರಿಗೆ ಬದಲಾಗುವ ಸಂಕೇತಗಳು ಅದರ ಹಿಂದಿನ ಮೌಲ್ಯಗಳ ಕಳೆದು ಕೊಳ್ತಾ ಇದಾವ ...
ಎಷ್ಟೋ ಚಿತ್ರ ವಿಚಿತ್ರ ಪದ್ದತಿಗಳನ್ನ ಗೆಳೆಯಾರ ನಡುವ ನೋಡೇನಿ... ಉದಾಹರಣೆ ಹೇಳಬೇಕು ಅಂದ್ರ ತೋರಬೆರಳು ಮತ್ತು ಕಿರುಬೆರಳು ಮೊದಲು ಕೂಡಿಸಿ, ನಂತರ ಹೆಬ್ಬೆಟ್ಟುಗಳ ಅಂಟಿಸಿ, ಮುಂಗೈ Clockwise ತಿರುಗಿಸಿ, ಕೈ ಕುಲುಕೋ ಅಭ್ಯಾಸ... ಇತ್ತಿತ್ಲಾಗ ನೋಡಿದ್ದು ಅಂದ್ರ ಮುಷ್ಟಿಗೆ ಮುಷ್ಠಿ ಮೆತ್ತಗ ಗುದ್ದಿ, ಕೈಬೆರಳುಗಳ ಕೊಂಕಿ ಮಾಡಿ, ಕೈಹಿಡಿದು ಭುಜಕ್ಕ ಢಿಕ್ಕಿ ಹೊಡೆಯೋದು... ಮೊದಲ ಆಗಿದ್ರ ಎನಲೇ ಮಂಗ್ಯಾನ ಮಗನ ಎಲ್ಲಿ ಸತ್ತಿದ್ದಿ ಇಷ್ಟು ಹೊತ್ತಿನ ತನಕ ಅಂತ ಶುರು ಆಗೋ ಮೀಟಿಂಗ್ ಈಗ HEY DUDE ಅಂತ ಶುರು ಆಗ್ತದ... ನಮ್ಮ ನಡುವಳಿಕೆ ಮ್ಯಾಲೆ ಮೀಡಿಯಾ ಪರಿಣಾಮ ಭಾಳ ಜೋರ್ ಅದ... ತಲೆಮಾರಿಂದ ತಲೆಮಾರಿಗೆ ಬದಲಾಗುವ ಸಂಕೇತಗಳು ಅದರ ಹಿಂದಿನ ಮೌಲ್ಯಗಳ ಕಳೆದು ಕೊಳ್ತಾ ಇದಾವ ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ